ಚಿತ್ರ ಕೃಪೆ: ಅಂತರ್ಜಾಲ
ನಿನ್ನೆ ಲೋಕಸಭೆಯಲ್ಲಿ
ಮಂಡಿಸಲಾದ 2012-2013
ನೇ ಸಾಲಿನ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ನಿರಾಸೆ
ಮೂಡಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಉಪಯೋಗವಾಗುವಂತಹ
ಬೆರೆಳೆಣಿಕೆಯಷ್ಟು ಯೋಜನೆಗಳನ್ನು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹೊರ ರಾಜ್ಯದ ಜನರಿಗೆ ನಮ್ಮ
ರಾಜ್ಯಕ್ಕೆ ವಲಸೆ ಬರಲು ಸುಲಭ ಮಾಡಿಕೊಡಲು ಯೋಚಿಸಿದಂತಿದೆ!! ಕೆಳಗಿರುವ ಈ ಪಟ್ಟಿಗಳನ್ನು ನೋಡಿ
೨೦೧೧ ನೇ ಸಾಲಿನ ಹಾಗೂ ೨೦೧೨ ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಲಾಗಿರುವ ಹೊಸ ರೈಲುಗಳ ಸಂಚರಿಸುವ
ಮಾರ್ಗವನ್ನು ನೀಡಲಾಗಿದೆ.
2011 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
|
2012 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
|
ಹೌರಾ – ಮೈಸೂರು ಎಕ್ಸ್‘ಪ್ರೆಸ್
|
ಯಶವಂತಪುರ – ಕುಚುವೇಲಿ
|
ಮೈಸೂರು – ಚನ್ನೈ ಎಕ್ಸ್‘ಪ್ರೆಸ್
|
ಚನ್ನೈ – ಬೆಂಗಳೂರು
|
ಅಹಮದಾಬಾದ್ – ಯಶವಂತಪುರ ಎಕ್ಸ್‘ಪ್ರೆಸ್
|
ಇಂದೂರ್ – ಯಶವಂತಪುರ
|
ಗೋರಕ್ಪುರ – ಯಶವಂತಪುರ ಎಕ್ಸ್‘ಪ್ರೆಸ್
|
ಮೈಸೂರು – ಸಾಯಿನಗರ
|
ವಾಸ್ಕೋ – ವೆಲಂಕಣಿ ಎಕ್ಸ್‘ಪ್ರೆಸ್
|
ಸೊಲ್ಲಾಪುರ – ಯಶವಂತಪುರ
|
ಎರ್ನಾಕುಲಂ – ಬೆಂಗಳೂರು ಎಕ್ಸ್‘ಪ್ರೆಸ್
|
ಬೀದರ್ – ಸಿಕಂದರಾಬಾದ್
|
ಹೌರಾ – ಮಂಗಳೂರು ವಿವೇಕ ಎಕ್ಸ್‘ಪ್ರೆಸ್
|
2012 ರಲ್ಲಿ ಮಾರ್ಗ
ವಿಸ್ತರಣೆಯ ರೈಲುಗಳು
|
ಪಾಲಕ್ಕಾಡ್ – ಮಂಗಳೂರು ಎಕ್ಸ್‘ಪ್ರೆಸ್
ಕೊಯಮುತ್ತೂರುವರೆಗೆ
|
ದಾದರ್ – ಯಶವಂತಪುರ ಎಕ್ಸ್‘ಪ್ರೆಸ್ –
ಪುದುಚೇರಿವರೆಗೂ
|
ಮಂಗಳೂರು – ತಿರುವನಂತಪುರ ಎಕ್ಸ್‘ಪ್ರೆಸ್ –
ನಾಗರಕೊಯಿಲ್ ವರೆಗೂ
|
ಈ ಹೊಸ ರೈಲು ಯೋಜನೆಗಳು,
ವಿಸ್ತರಣೆಗಳು ಎಲ್ಲವೂ ನಮ್ಮ ರಾಜ್ಯದ ಜನರ ಓಡಾಟವನ್ನು ಸುಲಭಗೊಳಿಸುವ ಬದಲು ಹೊರ ರಾಜ್ಯದ
ಜನರನ್ನು ನಮ್ಮ ರಾಜ್ಯದ ರಾಜಧಾನಿಗೆ ತಂದಿಳಿಸುವ ಯೋಜನೆಗಳಾಗಿ ಕಾಣುತ್ತವೆ. ಇನ್ನು ನಮ್ಮ ರಾಜ್ಯದ
ಯೋಜನೆಗಳ ಪಟ್ಟಿ ನೋಡಿದರೆ ಅಲ್ಲಿ ಇನ್ನು ಗೇಜ್ ಪರಿವರ್ತನೆ, ಮಾರ್ಗಗಳ ಸರ್ವೆ, ಮೇಲ್ಸೇತುವ,
ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಿಕೆ ಯಂತಹ ಸಣ್ಣ ಯೋಜನೆಗಳು ಕಾಣಸುಗುತ್ತವೇ ಹೊರತು ನಮ್ಮ
ಜನರ ಸಂಚಾರವನ್ನು ಸುಲಭಗೊಳಿಸುವ ಯೋಜನೆಗಳು ಕಾಣಸಿಗುವುದಿಲ್ಲ. ಈ ಹಿಂದೆ ೨೦೧೧ ನೇ ಸಾಲಿನ ರೈಲ್ವೆ ಬಜೆಟ್ ಸಮಯದಲ್ಲಿ ನಾನು ಮಾಡಿದ್ದ ವಿಶ್ಲೇಷಣೆ ಈ ವರ್ಷಕ್ಕೂ ಅನ್ವಯಿಸಬಹುದು.
ಜನಸಾಂದ್ರತೆ:
ಜನರು ಬೇರೆಡೆಗೆ ವಲಸೆ ಹೋಗಲು
ಆಯಾ ರಾಜ್ಯದಲ್ಲಿರುವ ಜನಸಾಂದ್ರತೆಯು ಕಾರಣವಾಗಿರಬಹುದು. ಆಯಾ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ
ಜನಸಂಖ್ಯೆಯಿಂದಾಗಿ, ಆಲ್ಲಿ ಏರ್ಪಡುವ
ಪೈಪೋಟಿಯಿಂದಾಗಿ, ಬದುಕು ಕಂಡುಕೊಳ್ಳಲು ಜನರು ಹೊರ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಶುರು
ಮಾಡುತ್ತಾರೆ. ರೈಲ್ವೆ ಇಲಾಖೆ ತಯಾರಿಸುವ ಇಂತಹ ಯೋಜನೆಗಳು ಜನರಿಗೆ ಕರ್ನಾಟಕದಂತಹ ಕಡಿಮೆ ಜನಸಾಂದ್ರತೆ
ಹೊಂದಿರುವ ರಾಜ್ಯಗಳಿಗೆ ವಲಸೆ ಬರಲು ಉತ್ತೇಜನ ನೀಡುವಂತೆ ಕಾಣಿಸುತ್ತವೆ. ಕೆಳಗೆ ಕೊಟ್ಟಿರುವ
ಪಟ್ಟಿಯಲ್ಲಿ ವಿವಿಧ ರಾಜ್ಯಗಳಲ್ಲಿರುವ ಜನಸಾಂದ್ರತೆಯನ್ನು ನೋಡಿ:
ರಾಜ್ಯ
|
ಪ್ರತಿ ಚದುರ ಕಿಮಿಗೆ ಇರುವ ಜನಸಾಂದ್ರತೆ
|
ಬಿಹಾರ್
|
1102
|
ಉತ್ತರ ಪ್ರದೇಶ
|
828
|
ಪಶ್ಚಿಮ ಬಂಗಾಳ
|
1030
|
ತಮಿಳುನಾಡು
|
555
|
ಕೇರಳ
|
859
|
ಕರ್ನಾಟಕ
|
319
|
ಮಾಹಿತಿ: ಮ್ಯಾಪ್ಸ್ ಆಫ್
ಇಂಡಿಯಾ
ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಒಪಿಸಬೇಕು:
ನಮ್ಮ ರಾಜ್ಯದಲ್ಲಿ ಯಾವ
ಊರಿಂದ ಊರಿಗೆ ರೈಲುಗಳಿರಬೇಕು, ಎಷ್ಟು ರೈಲುಗಳನ್ನು ಓಡಿಸಬೇಕು ಎಂದು ಈಗ ಕೇಂದ್ರದಲ್ಲಿ
ಕುಳಿತಿರುವ ರೈಲ್ವೆ ಮಂಡಳಿ ನಿರ್ಧರಿಸುತ್ತದೆ. ಹಲವು ದಶಕಗಳಿಂದ ಹಲವಾರು ಅವಶ್ಯಕ ಯೋಜನೆಗಳ
ಬಗ್ಗೆ ಇಲಾಖೆಗೆ ನಮ್ಮ ಶಾಸಕರು, ಸಂಸದರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅವಿನ್ನೂ ಧೂಳು
ಹಿಡಿದು ಕೂತಿವೆ. ಯಾವ ಊರಿಂದ ಯಾವ ಊರಿಗೆ ರೈಲು ಮಾರ್ಗ ಇರಬೇಕು, ಇದರ ಒಳಿತು ಕೆಡಕೇನು
ಅನ್ನುವುದು ಅವರಿಗಿಂತ ನಮಗೆ ಚೆನ್ನಾಗಿ ಗೊತ್ತಿರುತ್ತದೆ ಅಲ್ಲವೇ? ಆದ್ದರಿಂದ ರೈಲ್ವೆ
ಇಲಾಖೆಯನ್ನು ರಾಜ್ಯಗಳ ಕೈಗೆ ಕೇಂದ್ರ ಸರ್ಕಾರ ಒಪ್ಪಿಸಬೇಕು ಇದರಿಂದ ಆಯಾ ರಾಜ್ಯಕ್ಕೆ ಬೇಕಾಗಿರುವ
ಯೋಜನೆಗಳನ್ನು ಅನುಷ್ಠಾನಗೊಳಿಸಲು ಯಾರದೋ ಮರ್ಜಿಗೆ ಕಾಯುವ ಅವಶ್ಯಕತೆ ಇರುವುದಿಲ್ಲ.