ಶನಿವಾರ, ಜನವರಿ 15, 2011
ತಿರುವಳ್ಳುವರ್ ಜಯಂತಿ ಆಚರಣೆ ಕೇವಲ ಭಾಷಾ ಅಲ್ಪಸಂಖ್ಯಾತರ ಓಲೈಕೆ
ಸರಕಾರದ ಅನುಮತಿ ಅಥವಾ ಪಾಲಿಕೆಯ ಕೌನ್ಸಿಲ್ ನಲ್ಲಿ ತೀರ್ಮಾನಿಸದೆ ಬಿಬಿಎಂಪಿ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿರುವ ವಿಷಯ ನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುವುದನ್ನ ನೀವುಗಳು ಗಮನಿಸಿರುತ್ತೀರಿ. ಜನವರಿ 16 ರಂದು ತಿರುವಳ್ಳವರ್ ಜಯಂತಿ ಇದೆ, ಅದನ್ನು ಬಿಬಿಎಂಪಿ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕರ್ನಾಟಕ ತಮಿಳು ಫೆಡೆರೇಷನ್ ಮನವಿಯನ್ನು ಮಾಡಿದ್ದು, ಇದಕ್ಕೆ ಮಹಾನಗರ ಪಾಲಿಕೆಯ ಕೆಲವು ಸದಸ್ಯರು ದನಿಗೂಡಿಸಿರುವುದು ಕಾಣಿಸುತ್ತಿದೆ.
ಈ ತೀರ್ಮಾನದ ಹಿಂದೆ ಮುಖ್ಯವಾಗಿ ಎರಡು ಸಮಸ್ಯೆಗಳು ಕಾಣಿಸತ್ತಿವೆ. ಮೊದಲನೆಯದಾಗಿ ಕೆಲವು ತಮಿಳರ ಮೂಲಭೂತವಾದಿತನ. ಹಲವು ದಶಕಗಳಿಂದ ಇರುವ ತಮಿಳರು ಇಂದಿಗೂ ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ತಮಿಳು ಸಂಘಟನೆಗಳು ತಾವು ಯಾವದೇ ಕಾರಣಕ್ಕೂ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವುದಿಲ್ಲ ಹಾಗೂ ಬೇರೆಯವರು ಬೆರೆಯುವುದನ್ನು ತಡೆಯುತ್ತಿವೆ. ಇದನ್ನೇ 2009ರಲ್ಲಿ ತಿರುವಳ್ಳುವರ್ ಪ್ರತಿಮೆ ಅನುಷ್ಠಾನದ ಸಮಯದಲ್ಲಿ ನೋಡಿದ್ದು. ಈ ತಮಿಳು ಮೂಲಭೂತವಾದಿತನವನ್ನು ಪ್ರಶ್ನಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ಪ್ರತಿಮೆ ಅನಾವರಣೆಗೆ ಸರ್ಕಾರ ದಾರಿಮಾಡಿಕೊಟ್ಟಿತು.
ಎರಡನೆಯ ಸಮಸ್ಯೆ ರಾಜಕೀಯ ಪಕ್ಷಗಳ ಓಟಿನ ರಾಜಕಾರಣ. ಈ ತೀರ್ಮಾನದ ಹಿಂದೆ ರಾಷ್ಟ್ರೀಯ ಪಕ್ಷಗಳ ಭಾಷಾ ಅಲ್ಪಸಂಖ್ಯಾತರ ಓಲೈಕೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಕಾಣುತ್ತಿಲ್ಲ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 500ನೇ ಜಯಂತಿಯನ್ನು ವರ್ಷಾಂತರಗಳಿಂದ ನೆಪಗಳನ್ನು ಹೇಳುತ್ತಾ ಮೂಂದುಡುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ, ಈಗ ಧಿಡೀರನೆ ತಿರುವಳ್ಳವರ್ ಜಯಂತಿ ಆಚರಿಸುವುದಕ್ಕೆ ಹೊರಟಿರುವುದು ಮತಗಳ ಒಲೈಕೆ ಅಲ್ಲದೇ ಮತ್ತೇನು? ನಮ್ಮ ನಾಡಿನಲ್ಲಿರುವ ಅನೇಕ ಮಹಾನ ಚೇತನಗಳ ನೆನಪಿಗಾಗಿ ಜಯಂತಿ, ಸ್ಮಾರಕಗಳು, ಸಂಗ್ರಹಾಲಯಗಳು ಹೀಗೆ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿರುವಾಗ ಈ ಮತಬ್ಯಾಂಕ್ ರಾಜಕಾರಣ, ಅಲ್ಪಸಂಖ್ಯಾತರ ಓಲೈಕೆ ಎಷ್ಟರ ಮಟ್ಟಿಗೆ ಸಮಂಜಸ? ಇಂತಹುದೇ ಕೆಲಸವನ್ನು ನಾವು ಚನ್ನೈ ಮಹಾನಗರ ಪಾಲಿಕೆ ಅಥವಾ ತಮಿಳುನಾಡು ಸರ್ಕಾರದಿಂದ ಸರ್ವಜ್ಞ ಮೂರ್ತಿಯ ಜಯಂತಿ ಆಚರಿಸುವುದನ್ನು ಕಾಣಲು ಸಾಧ್ಯವಿಲ್ಲಾ. ಅಲ್ಲವೇ????
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೆಂಗಳೂರು ಕಟ್ಟಿದ ಕೆಂಪೇಗೌಡರ ಜಯಂತಿ ಮಾಡಕ್ಕೆ ಆಸಕ್ತಿ ಇಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಕುಣಿದಾಡಿಕೊಂಡು ತಿರುವಳ್ಳುವರ್ ಜಯಂತಿಗೆ ಪೂರ್ಣ ಸಹಕಾರ ಕೊಡಲು ಮುಂದಾಗಿದ್ದಾರೆ. ತಮಾಷೆ ಅಂದರೆ, ಒಂದು ಕಡೆ ನುಡಿ ತೇರು ಅಂತ ಪೊಳ್ಳು ಕನ್ನಡಾಭಿಮಾನ ಪ್ರದರ್ಶಿಸುತ್ತಾ, ಮತ್ತೊಂದೆಡೆ ಭಾಷಾ ಅಲ್ಪಸಂಖ್ಯಾತರನ್ನ ಓಲೈಸಲು ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ತಮಿಳರು ಮುಖ್ಯವಾಹಿನಿಗೆ ಬರಲು ಹಿನ್ನಡೆಯನ್ನು ಉಂಟುಮಾಡುತ್ತಿರುವ ಬಿಬಿಎಂಪಿ ಯ ಈ ಧೋರಣೆಯನ್ನು ವಿರೋಧಿಸೋಣ.
ಪ್ರತ್ಯುತ್ತರಅಳಿಸಿ